#BhagavadGita
लभन्ते ब्रह्मनिर्वाणमृषयः क्षीणकल्मषाः।
छिन्नद्वैधा यतात्मानः सर्वभूतहिते रताः।।5.25।।
5.25 The seers whose
sins have been destroyed, who are freed from doubt, whose sense organs are
under control, who are engaged in doing good to all beings, attain absorption
in Brahman.
5.25 ಪಾಪಗಳನ್ನೆಲ್ಲಾ ನಾಶಮಾಡಿಕೊಂಡು, ಸಂಶಯಗಳನ್ನೆಲ್ಲಾ ಕತ್ತರಿಸಿಕೊಂಡು,
(ದ್ವೈತಭಾವನೆಗಳೆಲ್ಲ ನಾಶವಾಗಿ) ಜಿತೇಂದ್ರಿಯರಾದ ಮತ್ತು ಎಲ್ಲಾ ಜೀವಿಗಳಿಗೂ ಹಿತವನ್ನೆಸಗುವುದರಲ್ಲೇ ನಿರತರಾಗಿರುವ ಇಂತಹ ಋಷಿಗಳು ಮೋಕ್ಷವನ್ನು (ಬ್ರಹ್ಮನಿರ್ವಾಣವನ್ನು) ಪಡೆಯುತ್ತಾರೆ.
कामक्रोधवियुक्तानां यतीनां यतचेतसाम्।
अभितो ब्रह्मनिर्वाणं वर्तते विदितात्मनाम्।।5.26।।
5.26 Absolute freedom
(or Brahmic bliss) exists on all sides for those self-controlled ascetics who
are free from desire and anger, who have controlled their thoughts and who have
realised the Self.
5.26
ಕಾಮಕ್ರೋಧಗಳಿಂದ ವಿಮುಕ್ತರಾದ ಇಂತಹ ಯತಿಗಳಿಗೆ ಮತ್ತು ಚಿತ್ತವನ್ನು ಸದಾ ಸಮತ್ವದಿಂದ ಇಟ್ಟುಕೊಂಡಿರುವ ಇಂತಹ ಆತ್ಮವೇತ್ತರಿಗೆ ಬ್ರಹ್ಮನಿರ್ವಾಣವು (ಬ್ರಾಹ್ಮೀಸ್ಥಿತಿಯು) ಕೂಡಲೇ ಪ್ರಾಪ್ತಿಯಾಗುತ್ತದೆ.