Tuesday, July 31, 2018

Bhagavadgita 18.66 & 18.67

#BhagavadGita

सर्वधर्मान्परित्यज्य मामेकं शरणं व्रज।
अहं त्वा सर्वपापेभ्यो मोक्षयिष्यामि मा शुचः।।18.66।।

18.66 Abandon all varieties of religion and just surrender unto Me. I shall deliver you from all sinful reaction. Do not fear.

18.66 ಸರ್ವಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನೇ ಶರಣು ಹೊಂದು. ನಾನು ನಿನ್ನನ್ನು ಸಕಲ ಪಾಪಗಳಿಂದಲೂ ಬಿಡುಗಡೆ ಮಾಡುವೆನು, ಶೋಕಿಸಬೇಡ.

इदं ते नातपस्काय नाभक्ताय कदाचन।
चाशुश्रूषवे वाच्यं मां योऽभ्यसूयति।।18.67।।

18.67 This confidential knowledge may not be explained to those who are not austere, or devoted, or engaged in devotional service, nor to one who is envious of Me.

18.67 ಇದನ್ನು ತಪಸ್ವಿಯಲ್ಲದವನಿಗೆ ಹೇಳಬಾರದು; ಭಕ್ತನಲ್ಲದವನಿಗೆ ಎಂದಿಗೂ ಹೇಳತಕ್ಕದಲ್ಲ. ಗುರು ಶುಶ್ರೂಷೆಯನ್ನು ಮಾಡಿದವನಿಗೂ ಹೇಳಬಾರದು. ನನ್ನಲ್ಲಿ ಅಸೂಯೆ ಇರುವವನಿಗೂ ಹೇಳಬಾರದು.

Bhagavadgita 18.64 & 18.65

#BhagavadGita

सर्वगुह्यतमं भूयः श्रृणु मे परमं वचः।
इष्टोऽसि मे दृढमिति ततो वक्ष्यामि ते हितम्।।18.64।।

18.64 Because you are My very dear friend, I am speaking to you the most confidential part of knowledge. Hear this from Me, for it is for your benefit.

18.64 ರಹಸ್ಯಗಳಲ್ಲೆಲ್ಲಾ ಹೆಚ್ಚಿನದಾದ ರಹಸ್ಯವನ್ನು ಮತ್ತೆ ಹೇಳುವೆನು. ನನ್ನ ದಿವ್ಯವಾಣಿಯನ್ನು ಆಲಿಸು. ನೀನು ನನಗೆ ಬಹಳವಾಗಿ ಪ್ರಿಯನಾಗಿರುವುದರಿಂದ ನಿನಗೆ ಹಿತವಾದುದನ್ನು ಹೇಳುವೆನು ಕೇಳು.

मन्मना भव मद्भक्तो मद्याजी मां नमस्कुरु।
मामेवैष्यसि सत्यं ते प्रतिजाने प्रियोऽसि मे।।18.65।।

18.65 Always think of Me and become My devotee. Worship Me and offer your homage unto Me. Thus you will come to Me without fail. I promise you this because you are My very dear friend.

18.65 ನನ್ನಲ್ಲಿಯೇ ಮನಸ್ಸನ್ನಿಡು, ನನ್ನ ಭಕ್ತನಾಗು, ನನ್ನನ್ನೇ ಪೂಜಿಸು. ನನ್ನನ್ನೇ ನಮಸ್ಕರಿಸು. ಹೀಗೆ ಮಾಡಿದರೆ ನನ್ನನ್ನೇ ಹೊಂದುವಿ. ಇದನ್ನು ಆಣೆ ಮಾಡಿ ಹೇಳುತ್ತೇನೆ. ಏಕೆಂದರೆ ನೀನು ನನಗೆ ಪ್ರಿಯನಾಗಿರುತ್ತೀಯೆ.