Thursday, November 2, 2017

Bhagavadgita 4.7 & 4.8

#BhagavadGita

यदा यदा हि धर्मस्य ग्लानिर्भवति भारत
अभ्युत्थानमधर्मस्य तदाऽऽत्मानं सृजाम्यहम्।।4.7।।

4.7 O scion of the Bharata dynasty, whenever there is a decline righteousness and rise of unrighteousness, then do I manifest Myself.

4.7 ಭರತಕುಲೋತ್ಪನ್ನನೇ, ಯಾವಾಗ ಧರ್ಮಕ್ಕೆ ಹಾನಿ ಉಂಟಾಗುವುದೋ ಮತ್ತು ಅಧರ್ಮವೇ ತಾಂಡವವಾಡುವುದೋ ಆಗ ನಾನು ನನ್ನ ಅವತಾರವನ್ನು ಪ್ರಕಟಗೊಳಿಸಿಕೊಳ್ಳುವೆನು. 

परित्राणाय साधूनां विनाशाय दुष्कृताम्
धर्मसंस्थापनार्थाय संभवामि युगे युगे।।4.8।।

4.8 For the protection of the good, destruction of the wicked and for the establishment of righteousness, I am born in every age.

4.8 ಒಳ್ಳೆಯವರನ್ನು ಕಾಪಾಡುವುದಕ್ಕಾಗಿ , ಕೆಟ್ಟವರನ್ನು ನಾಶಗೊಳಿಸುವುದಕ್ಕಾಗಿ ಮತ್ತು ಧರ್ಮವನ್ನು ನೆಲೆಗೊಳಿಸುವುದಕೋಸ್ಕರ ಯುಗಯುಗದಲ್ಲೂ ನಾನು ಜನ್ಮತಾಳುತ್ತಿರುವೆನು.

Bhagavadgita 4.5 & 4.6

#BhagavadGita

श्री भगवानुवाच
बहूनि मे व्यतीतानि जन्मानि तव चार्जुन
तान्यहं वेद सर्वाणि त्वं वेत्थ परन्तप।।4.5।।

4.5 The Blessed Lord said O Arjuna, many lives of Mine have passed, and so have yours. I know them all, (but) you do not know, O scorcher of enemies!

4.5 ಶ್ರೀ ಭಗವಂತನು ಹೇಳುತ್ತಾನೆ -
ಎಲೈ ಅರ್ಜುನನೇ, ನನಗು ನಿನಗೂ ಅನೇಕ ಜನ್ಮಗಳು ಆಗಿಹೋಗಿವೆ. ಆದರೆ, ಎಲೈ ಪರಂತಪನೆ, ನಾನು ಅವೆಲ್ಲವನ್ನೂ ಬಲ್ಲೆನು; ನೀನು ಅರಿಯೆ.

अजोऽपि सन्नव्ययात्मा भूतानामीश्वरोऽपि सन्
प्रकृतिं स्वामधिष्ठाय संभवाम्यात्ममायया।।4.6।।

4.6 Though I am birthless, undecaying by nature, and the Lord of beings, (still) by subjugating My Prakriti, I take birth by means of My own Maya.

4.6 ನಾನು ಜನ್ಮರಹಿತನಾದರೂ, ನಾಶರಹಿತ ಸ್ವರೂಪನಾದರೂ, ಎಲ್ಲಾ ಜೀವಿಗಳ ಒಡೆಯನಾದರೂ, ನನ್ನ ಪ್ರಕೃತಿಯನ್ನು ವಶದಲ್ಲಿಟ್ಟುಕೊಂಡು ನನ್ನ ಮಾಯೆಯಿಂದ, ಜನ್ಮವನ್ನು ತಾಳುತ್ತಿರುವೆನು.