Sunday, June 3, 2018

Bhagavadgita 17.2 & 17.3

#BhagavadGita

श्री भगवानुवाच
त्रिविधा भवति श्रद्धा देहिनां सा स्वभावजा
सात्त्विकी राजसी चैव तामसी चेति तां श्रृणु।।17.2।।

17.2 The Supreme Lord said, according to the modes of nature acquired by the embodied soul, one's faith can be of three kinds-goodness, passion or ignorance. Now hear about these.

17.2 ಶ್ರೀ ಭಗವಂತನು ಹೇಳುತ್ತಾನೆ-
ಜೀವರಿಗೆ ಸ್ವಭಾವದಿಂದುಂಟಾಗುವ ಶ್ರದ್ಧೆಯು ಸಾತ್ವಿಕ, ರಾಜಸ, ತಾಮಸ ಎಂದು ಮೂರು ಬಗೆಯಿರುವುದು. ಅದನ್ನು ತಿಳಿಸುವೆನು ಕೇಳು.

सत्त्वानुरूपा सर्वस्य श्रद्धा भवति भारत
श्रद्धामयोऽयं पुरुषो यो यच्छ्रद्धः एव सः।।17.3।।

17.3 According to one's existence under the various modes of nature, one evolves a particular kind of faith. The living being is said to be of a particular faith according to the modes he has acquired.

17.3  ಭರತವಂಶೋತ್ಪನ್ನನೇ, ಯಾರ ಶ್ರದ್ಧೆಯಾದರೂ ಸಹ ಅವರವರ ಅಂತಃಕರಣಕ್ಕೆ ತಕ್ಕಂತೆ ಇರುವುದು. ಪುರುಷನು ಶ್ರದ್ಧಾಮಯನಾಗಿರುತ್ತಾನೆ. ಯಾವನು ಎಂಥ ಶ್ರದ್ಧೆಯುಳ್ಳವನೋ ಅವನು ಅದಕ್ಕೆ ತಕ್ಕಂತೆ ಇರುವನು.

Bhagavadgita 16.24 & 17.1

#BhagavadGita

तस्माच्छास्त्रं प्रमाणं ते कार्याकार्यव्यवस्थितौ
ज्ञात्वा शास्त्रविधानोक्तं कर्म कर्तुमिहार्हसि।।16.24।।

16.24 One should understand what is duty and what is not duty by the regulations of the scriptures. Knowing such rules and regulations, one should act so that he may gradually be elevated.

16.24 ಆದುದರಿಂದ ಮಾಡತಕ್ಕದ್ದು, ಮಾಡಬಾರದ್ದು ಎಂಬುದನ್ನು ಗೊತ್ತುಪಡಿಸುವುದಕ್ಕೆ ಶಾಸ್ತ್ರವೇ ನಿನಗೆ ಪ್ರಮಾಣವು. ಶಾಸ್ತ್ರವಿಧಿಯಲ್ಲಿ ಹೇಳಿರುವುದನ್ನು ತಿಳಿದುಕೊಂಡೇ ನೀನು ಇಲ್ಲಿ ಕರ್ಮವನ್ನು ಮಾಡಬೇಕು.

अर्जुन उवाच
ये शास्त्रविधिमुत्सृज्य यजन्ते श्रद्धयाऽन्विताः
तेषां निष्ठा तु का कृष्ण सत्त्वमाहो रजस्तमः।।17.1।।

17.1 Arjuna said, O Krsna, what is the situation of one who does not follow the principles of scripture but worships according to his own imagination? Is he in goodness, in passion or in ignorance?

17.1 ಅರ್ಜುನನು ಹೇಳುತ್ತಾನೆ-
ಎಲೈ ಕೃಷ್ಣನೇ, ಯಾರು ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದೊಡಗೂಡಿ ಪೂಜಿಸುವರೋ ಅವರ ನಿಷ್ಠೆಯು ಸಾತ್ತ್ವಿಕವೋ, ರಾಜಸವೋ ಅಥವಾ ತಾಮಸವೋ?