Wednesday, November 8, 2017

Bhagavadgita 4.11 & 4.12

#BhagavadGita

ये यथा मां प्रपद्यन्ते तांस्तथैव भजाम्यहम्
मम वर्त्मानुवर्तन्ते मनुष्याः पार्थ सर्वशः।।4.11।।

4.11 According to the manner in which they approach Me, I favour them in that very manner. O son of Partha, human beings follow My path in every way.

4.11 ಯಾರು ನನ್ನನು ಹೇಗೆ ಶರಣುಹೋಗುವರೋ ನಾನು ಅವರಿಗೆ ಹಾಗೆ ಒಲಿಯುವೆನು. ಎಲೈ ಪಾರ್ಥನೆ, ಎಲ್ಲಾ ಮನುಷ್ಯರೂ ಎಲ್ಲಾ ರೀತಿಯಲ್ಲೂ ನನ್ನನೇ ಪಡೆಯಲು ಪ್ರಯತ್ನಿಸುತ್ತಿರುವರು.

काङ्क्षन्तः कर्मणां सिद्धिं यजन्त इह देवताः
क्षिप्रं हि मानुषे लोके सिद्धिर्भवति कर्मजा।।4.12।।

4.12 Longing for the fruition of actions (of their rites and duties), they worship the gods here. For, in the human world, success from action comes quickly.

4.12 ಕರ್ಮದ ಫಲದಲ್ಲಿ ಆಸಕ್ತಿಯುಳ್ಳ ಜನ ಅದಕ್ಕಾಗಿಯೇ ದೇವತೆಗಳನ್ನು ಪೂಜಿಸುತ್ತಾರೆ. ಮನುಷ್ಯಲೋಕದಲ್ಲಿ ಕರ್ಮಕ್ಕೆ ಫಲವು ಅತಿ ಬೇಗನೇ ದೊರೆಯುವುದು.

Bhagavadgita 4.9 & 4.10

#BhagavadGita

जन्म कर्म मे दिव्यमेवं यो वेत्ति तत्त्वतः
त्यक्त्वा देहं पुनर्जन्म नैति मामेति सोऽर्जुन।।4.9।।

4.9 He who thus knows truly the divine birth and actions of Mine does not get birth after casting off the body. He attains Me, O Arjuna.

4.9 ಎಲೈ ಅರ್ಜುನನೇ, ನನ್ನ ದಿವ್ಯವಾದ ಜನ್ಮವನ್ನು ಮತ್ತು ಕರ್ಮವನ್ನು ಹೀಗೆ ಯಾರು ಸರಿಯಾಗಿ ತಿಳಿಯುತ್ತಾರೋ ಅಂತಹವರು ದೇಹವನ್ನು ಬಿಟ್ಟಮೇಲೆ ಮತ್ತೆ ಜನ್ಮ ತಾಳುವುದಿಲ್ಲ. ಅವರು ನನ್ನನೇ ಸೇರುವರು.

वीतरागभयक्रोधा मन्मया मामुपाश्रिताः
बहवो ज्ञानतपसा पूता मद्भावमागताः।।4.10।।

4.10 Many who were devoid of attachment, fear and anger, who were absorbed in Me, who had taken refuge in Me, and were purified by the austerity of Knowledge, have attained My state.

4.10 ಆಸೆ, ಭಯ ಮತ್ತು ಕ್ರೋಧಗಳಿಂದ ಮುಕ್ತರಾಗಿ, ನನ್ನನೇ ಭಜಿಸುವವರಾಗಿ ನನ್ನ ಆಶ್ರಯವನ್ನು ಕೋರಿ, ಜ್ಞಾನಸಾಧನೆಗಳ ಮೂಲಕ ಪರಿಶುದ್ಧರಾದವರು ನನ್ನ ಸ್ವರೂಪವನ್ನೇ ಪಡೆದಿದ್ದಾರೆ.