Wednesday, August 15, 2018

Bhagavadgita 18.78

#BhagavadGita

यत्र योगेश्वरः कृष्णो यत्र पार्थो धनुर्धरः।
तत्र श्रीर्विजयो भूतिर्ध्रुवा नीतिर्मतिर्मम।।18.78।।

18.78 Wherever there is Krsna, the master of all mystics, and wherever there is Arjuna, the supreme archer, there will also certainly be opulence, victory, extraordinary power, and morality. That is my opinion.

18.78 ಎಲ್ಲಿ ಯೋಗೇಶ್ವರನಾದ ಕೃಷ್ಣನಿರುವನೋ, ಎಲ್ಲಿ ಧನುರ್ಧಾರಿಯಾದ ಪಾರ್ಥನಿರುವನೋ, ಅಲ್ಲಿ ನಿತ್ಯವೂ ಸಂಪತ್ತೂ, ಗೆಲುವೂ, ಏಳಿಗೆಯೂ, ನೀತಿಯೂ ನೆಲೆಸಿರುವುವೆಂದು ನನ್ನ ಮತವು.

Bhagavadgita 18.76 & 18.77

#BhagavadGita

राजन्संस्मृत्य संस्मृत्य संवादमिममद्भुतम्।
केशवार्जुनयोः पुण्यं हृष्यामि मुहुर्मुहुः।।18.76।।

18.76 O King, as I repeatedly recall this wondrous and holy dialogue between Krishna and Arjuna, I take pleasure, being thrilled at every moment.

18.76 ರಾಜನೇ, ಅದ್ಭುತವಾದ ಕೇಶವಾರ್ಜುನರ ಶುಭ ಸಂವಾದವನ್ನು ನೆನೆನೆನೆದು ಮತ್ತೆಮತ್ತೆ ನನಗೆ ರೋಮಾಂಚನವಾಗುತ್ತಿದೆ.

तच्च संस्मृत्य संस्मृत्य रूपमत्यद्भुतं हरेः।
विस्मयो मे महान् राजन् हृष्यामि पुनः पुनः।।18.77।।

18.77 O King, when I remember the wonderful form of Lord Krishna, I am struck with even greater wonder, and I rejoice again and again.

18.77 ಎಲೈ ರಾಜನೇ, ಹರಿಯ ಅದ್ಭುತವಾದ ವಿಶ್ವರೂಪವನ್ನು ನೆನೆನೆನೆದು ನನಗೆ ಹೆಚ್ಚಿನ ವಿಸ್ಮಯವಾಗುತ್ತಿದೆ. ಮತ್ತೆಮತ್ತೆ ರೋಮಾಂಚನವಾಗುತ್ತಿದೆ.

Monday, August 6, 2018

Bhagavadgita 18.74 & 18.75

#BhagavadGita

सञ्जय उवाच
इत्यहं वासुदेवस्य पार्थस्य महात्मनः।
संवादमिममश्रौषमद्भुतं रोमहर्षणम्।।18.74।।

18.74 Sanjaya said: Thus have I heard the conversation of two great souls, Krsna and Arjuna. And so wonderful is that message that my hair is standing on end.

18.74 ಸಂಜಯನು ಹೇಳುತ್ತಾನೆ-
ರೀತಿಯಲ್ಲಿ ಮಹಾತ್ಮನಾದ ವಾಸುದೇವನಿಗೂ, ಪಾರ್ಥನಿಗೂ ನಡೆದ ಅದ್ಭುತವಾದ ಮತ್ತು ರೋಮಾಂಚನವನ್ನು ಉಂಟುಮಾಡುವ ಸಂವಾದವನ್ನು ನಾನು ಕೇಳಿದೆನು.

व्यासप्रसादाच्छ्रुतवानेतद्गुह्यमहं परम्।
योगं योगेश्वरात्कृष्णात्साक्षात्कथयतः स्वयम्।।18.75।।

18.75 By the mercy of Vyasa, I have heard these most confidential talks directly from the master of all mysticism, Krsna, who was speaking personally to Arjuna.

18.75 ಯೋಗೀಶ್ವರನಾದ ಕೃಷ್ಣನು ಹೇಳಿದ ಪರಮ ರಹಸ್ಯವನ್ನು ನಾನು ವ್ಯಾಸರ ಅನುಗ್ರಹದಿಂದ ಕೇಳಿದೆನು.